'ಸೂರಕ್ಕಿ (ಸನ್ ಬರ್ಡ್) ನೆಕ್ಟರ್ಡಿನೇ ಕುಟುಂಬಕ್ಕೆ ಸೇರಿದ ಚಿಕ್ಕ ಪಕ್ಷಿ. ಇಂದಿನವರೆಗು ೧೩೨ ಸನ್ಬರ್ಡ್ ಜಾತಿಗಳನ್ನು ಕಂಡುಹಿಡಿಯಲಾಗಿದೆ. ಈ ಪಕ್ಷಿಗಳು ಹೂವಿನ ಮಕರಂದ, ಹುಳ, ಕ್ರಿಮಿ-ಕೀಟಗಳನ್ನು ಆಹಾರವಾಗಿ ಸೇವಿಸುತ್ತದೆ. ಈ ಪಕ್ಷಿಗಳು ತಮ್ಮ ಕೊಕ್ಕೆಯನ್ನು ಹೂವಿನೊಳಗೆ ಹಾಕಿ ಮಕರಂದವನ್ನು ಸೇವಿಸುತ್ತದೆ. ಈ ಪಕ್ಷಿ ಆಫ್ರಿಕಾ, ಭಾರತ, ಆಗ್ನೇಯ ಏಶಿಯ ಹಾಗು ಆಸ್ಟ್ರೇಲಿಯ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ.